ದಿನಕ್ಕೊಂದು ಕಥೆ
"ಭಾಗ್ಯ ದೇವತೆಯ ಹಿರಿಮೆ "
ಒಬ್ಬ ಬ್ರಾಹ್ಮಣ ಹಾಗೂ ಒಬ್ಬ ಹೊಗಳು ಭಟ್ಟ ಇಬ್ಬರೂ ಸ್ನೇಹಿತರು. ಒಮ್ಮೆ ಅವರ ಮಧ್ಯೆ ದೇವರು ದೊಡ್ಡವನೇ ರಾಜ ದೊಡ್ಡವನೇ ಎಂಬ ವಿಚಾರದಲ್ಲಿ ಘೋರ ಚರ್ಚೆಯೇ ತಲೆದೋರಿತು. "ಈ ದೇಶದ ರಾಜ ಮಹಾ ಉದಾರಿ. ಅವನು ಕೊಟ್ಟಾಗಲೇ ನಮಗೆ ಲಾಭ. ದೇವರು ಎಲ್ಲಾದರೂ ನಮ್ಮೆದುರು ಬಂದು ಕೊಡುತ್ತಾನೇನು?" ಹೊಗಳು ಭಟ್ಟ ರಾಜನನ್ನು ಬಹಳಷ್ಟು ಪ್ರಶಂಸಿಸಿದ.
"ದೇವರು ಖಂಡಿತ ದೊಡ್ಡವನೇ. ಅವನ ಅಪ್ಪಣೆಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು. ರಾಜನೂ ದೇವರ ಅಧೀನನೇ. ದೇವರು ಕೊಡಬೇಕಲ್ಲದೆ ರಾಜನ ಕೊಡುವುದು ಎಂಬುದು ಬರಿಯ ಭ್ರಮೆ" ಎಂದ ಬ್ರಾಹ್ಮಣ. ಟಇಬ್ಬರೂ ರಾಜಸಭೆಗೆ ಬಂದರು. ತಮ್ಮ ತಮ್ಮ ವಾದವನ್ನು ರಾಜನ ಮುಂದೆ ಅಳುಕಿಲ್ಲದೆ ಮಂಡಿಸಿದರು. ರಾಜ ಒಂದು ಕ್ಷಣ ಯೋಚಿಸಿ ಮಂತ್ರಿಯನ್ನು ಕರೆದು ಏನೋ ಪಿಸುಗುಟ್ಟಿದ. ಒಂದೆರಡು ಕ್ಷಣದಲ್ಲೇ ಮಂತ್ರಿ ಸೇವಕನೊಂದಿಗೆ ಬಂದ.
ಬ್ರಾಹ್ಮಣನಿಗೆ ಅಕ್ಕಿ, ಬೇಳೆ ಇತ್ಯಾದಿ ಊಟದ ವಸ್ತುಗಳನ್ನೂ, ಹೊಗಳು ಭಟ್ಟನಿಗೆ ಒಂದು ದೊಡ್ಡ ಕುಂಬಳಕಾಯಿಯನ್ನೂ ಕೊಟ್ಟು ಇಬ್ಬರೂ ನದಿತೀರದಲ್ಲಿ ಊಟಮಾಡಿ ಸೇವಿಸಿ ಸಂಜೆ ಮನಃ ಭೇಟಿ ಮಾಡಬೇಕು. ಆಗ ನಿಮಗೇ ನಿಖರವಾದ ಉತ್ತರ ಸಿಗುತ್ತದೆ' ಎಂದು ಆಜ್ಞೆ ಮಾಡಿದ.
ಇಬ್ಬರೂ ನದಿ ತೀರಕ್ಕೆ ಬಂದರು. ಹೊಗಳು ಭಟ್ಟ ತಕ್ಷಣವೇ ಹೇಳಿದ "ಮಿತ್ರ, ನನ್ನ ದೇಹದಲ್ಲಿ ವಾಯುಪ್ರಕೋಪವಿದೆ. ಕುಂಬಳಕಾಯಿ ತಿಂದರೆ ನನ್ನ ಹೊಟ್ಟೆ ಉಬ್ಬರಿಸುತ್ತದೆ, ಅಜೀರ್ಣವಾಗುತ್ತದೆ. ಹಾಗಾಗಿ ಇದನ್ನು ನೀನಿಟ್ಟುಕೋ. ನಿನ್ನಲ್ಲಿರುವ ಅಕ್ಕಿ, ಬೇಳೆ ನನಗೆ ಕೊಡು" ಎಂದನು.
ಬ್ರಾಹ್ಮಣ ಸಂತೋಷದಿಂದಲೇ ಅದಲುಬದಲು ಮಾಡಿಕೊಂಡ. ತನ್ನ ಕೈಯಲ್ಲಿರುವ ಕುಂಬಳಕಾಯಿಯನ್ನು ಒಡೆದ. ಅದರಿಂದ ಹೇರಳ ಮುತ್ತುರತ್ನ ಉದುರಿದವು. ಬ್ರಾಹ್ಮಣ ತಕ್ಷಣ ಯೋಚಿಸಿದ “ಬಹುಶಃ ರಾಜನು ಈ ಸಂಪತ್ತನ್ನು ಭಟ್ಟನಿಗೆ ಕೊಡಲು ಯೋಚಿಸಿರಬೇಕು. ದೇವರು ನನಗೇನೇ ಕೊಡಿಸಿದ" ಎನ್ನುತ್ತಲೇ ಒಂದು ಶಾಲಿನಲ್ಲಿ ಕಟ್ಟಿಕೊಂಡ.
ಇಬ್ಬರೂ ಸಂಜೆ ರಾಜನ ಭೇಟಿ ಮಾಡಿದರು. ರಾಜನು ಗಂಭೀರನಾಗಿ ಹೇಳಿದ "ಕೊನೆಗಾದರೂ ಬ್ರಾಹ್ಮಣ... ನಿನಗೆ ತಿಳಿಯಿತೇ? ದೇವರು ಐಶ್ವರ್ಯ ಕೊಡುವುದಲ್ಲ, ಐಶ್ವರ್ಯ ಬೇಕೆಂದರೆ ರಾಜನೇ ಕೃಪೆದೋರಬೇಕು ಎಂಬ ಸತ್ಯ ಮನದಟ್ಟಾಯಿತೇ?”
ಬ್ರಾಹ್ಮಣ ರಾಜನಿಗೆ ನಡೆದ ಸಂಗತಿಯನ್ನು ತಿಳಿಸಿ ಬಟ್ಟೆಯಲ್ಲಿ ಕಟ್ಟಿ ತಂದಿದ್ದ. ಸಂಪತ್ತನ್ನೆಲ್ಲ ರಾಜನ ಮುಂದಿಟ್ಟ. ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಬ್ರಾಹ್ಮಣನಿಗೇ ಸಂತೋಷದಿಂದಲೆ ಆ ಉಡುಗೊರೆಯನ್ನು ಕೊಟ್ಟೇ ಬಿಟ್ಟ.
ನೀತಿ :-- ದೈವಕೃಪೆಗೆ ಇತಿಮಿತಿ ಇಲ್ಲ. ದೈವೇಚ್ಛೆಯನ್ನು ವರ್ಣಿಸಲು ಸಾಧ್ಯವಿಲ್ಲ. ದೇವರಿಗೆ ಪಕ್ಷಪಾತ ಎಂಬುದಿಲ್ಲ ಎಂಬುದು ಮರೆಯಬಾರದು.
ಸಕಾರಾತ್ಮಕ ಯೋಚನೆ
ಮಹಿಳೆಯೊಬ್ಬಳು ತನ್ನ ದಿನದ ಸಂತೋಷವನ್ನು ಪ್ರತಿದಿನ ಮಲಗುವ ಮೊದಲು ಕಾಗದದ ಮೇಲೆ ಬರೆಯುತ್ತಿದ್ದಳು ... ಒಂದು ರಾತ್ರಿ ಅವಳು ಹೀಗೆ ಬರೆದಳು:
"ನಾನು ಖುಷಿಯಾಗಿದ್ದೇನೆ"
ನನ್ನ ಪತಿ ರಾತ್ರಿಯಿಡೀ ಜೋರಾಗಿ ಗೊರಕೆ ಹೊಡೆಯುತ್ತಾರೆ ಎಂಬುದು ನನಗೆ ಸಂತೋಷದ ವಿಷಯ, ಏಕೆಂದರೆ ಅವನು ಸುಖವಾಗಿದ್ದಾನೆ ಮತ್ತು ಅವನು ನನ್ನ ಬಳಿ ಇದ್ದಾನೆ. ಇದಕ್ಕಾಗಿ ದೇವರಿಗೆ ಧನ್ಯವಾದ..
ನಾನು ಖುಷಿಯಾಗಿದ್ದೇನೆ
ನನ್ನ ಮಗನದು ದಿನಾ ಬೆಳಿಗ್ಗೆ ಒಂದೇ ದೂರು ರಾತ್ರಿಯಿಡೀ ಸೊಳ್ಳೆಗಳು ಮತ್ತು ಕೀಟಗಳು ಮಲಗಲು ಬಿಡುವುದಿಲ್ಲ ಎಂಬ ವಿಷಯದಲ್ಲಿ ಎಂದು ನನಗೆ ಸಂತೋಷವಾಗಿದೆ. ಅಂದರೆ, ಅವನು ರಾತ್ರಿಯನ್ನು ಮನೆಯಲ್ಲಿ ಕಳೆಯುತ್ತಾನೆ, ಮತ್ತು ಅಲ್ಲಿ ಇಲ್ಲಿ ತಿರುಗಾಡಲು ಹೋಗುವುದಿಲ್ಲ. ಧನ್ಯವಾದ ದೇವರೆ..
ನಾನು ಖುಷಿಯಾಗಿದ್ದೇನೆ
ಪ್ರತಿ ತಿಂಗಳು, ವಿದ್ಯುತ್, ಗ್ಯಾಸ್, ಪೆಟ್ರೋಲ್, ನೀರು ಇತ್ಯಾದಿಗಳಿಗೆ ಸಾಕಷ್ಟು ಹಣ ಪಾವತಿಸಬೇಕಾಗುತ್ತದೆ. ಅಂದರೆ, ಈ ಎಲ್ಲಾ ವಸ್ತುಗಳು ನನ್ನ ಬಳಿ ಇವೆ, ಮತ್ತು ನನ್ನ ಬಳಕೆಯಲ್ಲಿವೆ. ಇದು ಇಲ್ಲದಿದ್ದರೆ, ಜೀವನ ಎಷ್ಟು ಕಷ್ಟ? ಧನ್ಯವಾದ ದೇವರೆ..
ನಾನು ಖುಷಿಯಾಗಿದ್ದೇನೆ
ದಿನದ ಕೊನೆಗೆ ನನಗೆ ಆಯಾಸವಾಗುತ್ತದೆ ನಿಜ, ಅಂದರೆ ದಿನವಿಡೀ ಕಷ್ಟಪಟ್ಟು ದುಡಿಯುವ ಶಕ್ತಿ ಮತ್ತು ಧೈರ್ಯ ನನ್ನಲ್ಲಿದೆ, ದೇವರ ದಯೆಯಿಂದ ಮಾತ್ರ ಇದು ಸಾಧ್ಯವಾಗಿದೆ.
ನಾನು ಖುಷಿಯಾಗಿದ್ದೇನೆ
ಪ್ರತಿದಿನ ನನ್ನ ಮನೆಯನ್ನು ಸ್ವಚ್ಛ ಮಾಡಬೇಕು ಅಲ್ಲದೇ, ಬಾಗಿಲು ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸಬೇಕು ಎಂಬದು ನನಗೆ ಸಂತೋಷದ ವಿಷಯ. ಅದೃಷ್ಟವಶಾತ್, ನನಗೆ ಮನೆ ಇದೆ. ಸೂರು ಇಲ್ಲದವರ ಗತಿಯೇನು? ಧನ್ಯವಾದಗಳು ದೇವರೇ, ಧನ್ಯವಾದಗಳು..
ನಾನು ಖುಷಿಯಾಗಿದ್ದೇನೆ
ಕೆಲವೊಮ್ಮೆ, ನಾನು ಸ್ವಲ್ಪ ಅನಾರೋಗ್ಯಕ್ಕೆ ಒಳಗಾಗುತ್ತೇನೆ. ಅಂದರೆ, ನಾನು ಹೆಚ್ಚಾಗಿ ಆರೋಗ್ಯವಾಗಿರುತ್ತೇನೆ. ಧನ್ಯವಾದಗಳು ದೇವರೇ, ಧನ್ಯವಾದಗಳು..
ನಾನು ಖುಷಿಯಾಗಿದ್ದೇನೆ
ಪ್ರತಿ ವರ್ಷ ಹಬ್ಬ ಹರಿದಿನಗಳನ್ನು ಅದ್ಧೂರಿಯಾಗಿ ಆಚರಿಸುವಾಗ, ಉಡುಗೊರೆಗಳನ್ನು ನೀಡುವಾಗ ಪರ್ಸ್ ಖಾಲಿಯಾಗುತ್ತದೆ. ಅಂದರೆ, ನನಗೆ ಪ್ರೀತಿಪಾತ್ರರು, ನನ್ನ ಹಿತೈಷಿಗಳು, ಸಂಬಂಧಿಕರು, ಸ್ನೇಹಿತರು, ನನ್ನ ಸ್ವಂತದವರು ಯಾರಿಗೆಲ್ಲಾ ನಾನು ಉಡುಗೊರೆಗಳನ್ನು ನೀಡಬಹುದು? ಅದಿಲ್ಲದಿದ್ದರೆ ಜೀವನ ಎಷ್ಟು ನೀರಸ..? ಧನ್ಯವಾದಗಳು ದೇವರೇ, ಧನ್ಯವಾದಗಳು..
ನಾನು ಖುಷಿಯಾಗಿದ್ದೇನೆ ಎಂದು ಪ್ರತಿದಿನ ಅಲಾರಾಂ ಶಬ್ದ ಕೇಳಿದ ಮೇಲೆ
ಎದ್ದೇಳುತ್ತೇನೆ. ಅಂದರೆ, ಪ್ರತಿದಿನ, ನಾನು ಹೊಸ ಬೆಳಿಗ್ಗೆ ನೋಡುತ್ತೇನೆ. ಇದು ಕೂಡ ದೇವರ ವರವ
ಈ ಜೀವನ ಸೂತ್ರವನ್ನು ಅನುಸರಿಸಿ, ತನ್ನ ಮತ್ತು ತನ್ನ ಜನರ ಜೀವನ ಸುಖಮಯವಾಗಿರಲಿ ಮತ್ತು ಶಾಂತಿ ನೆಮ್ಮದಿ ಇರಲಿ ಎಂದು ಬಯಸೋಣ... ಚಿಕ್ಕದೋ ದೊಡ್ಡದೋ ಕಷ್ಟದಲ್ಲಿಯೂ ಸುಖವನ್ನು ಹುಡುಕು, ಅದೇನೇ ಇರಲಿ, ಆ ದೇವರಿಗೆ ಕೃತಜ್ಞತೆ ಸಲ್ಲಿಸಿ, ಜೀವನ ಸುಖಮಯವಾಗಿರಲಿ..!!
#Spardha Bharathi Karunadu