ದಿನಕ್ಕೊಂದು ಕಥೆ
ಒಬ್ಬ ಸ್ವಾಮೀಜಿ 200 ಜನ ಇರುವ ರೂಂನಲ್ಲಿ ಉಪನ್ಯಾಸ ನೀಡುತ್ತಿದ್ದಾರೆ. ತನ್ನ ಜೇಬಿನಲ್ಲಿರುವ ಎರಡು ಸಾವಿರ ರೂಪಾಯಿಯ ನೋಟು ತೆಗೆದು ಇದು ಯಾರಿಗೆ ಬೇಕು ಎಂದು ಕೇಳಿದರು. ಅಲ್ಲಿರುವ 200 ಜನ ತಮಗೆ ಬೇಕು ಎಂದು ಕೈ ಮೇಲೆ ಎತ್ತಿದರು. ಸರಿ ಈ ಎರಡು ಸಾವಿರ ರೂಪಾಯಿಯನ್ನು ನಿಮ್ಮಲ್ಲಿ ಒಬ್ಬರಿಗೆ ಕೊಡುತ್ತೇನೆ ಎನ್ನುತ್ತಾ ಅದನ್ನು ಸಣ್ಣದಾಗಿ ಸುಕ್ಕಾಗುವಂತೆ ಮಾಡಚಿದರು. ಮತ್ತೆ ಯಾರಿಗೆ ಬೇಕು ಎಂದು ಕೇಳಿದನು. ಎಲ್ಲರೂ ತಮಗೆ ಬೇಕು ಎಂದು ಕೈ ಎತ್ತಿದರು. ಸರಿ ಎನ್ನುತ್ತಾ ಆ ಎರಡು ಸಾವಿರ ರೂಪಾಯಿಯನ್ನು ಕೆಳಗೆ ಹಾಕಿ ತನ್ನ ಕಾಲಿನಿಂದ ತುಳಿದು ಉಂಡೆ ಮಾಡಿದನು. ಆಗ ಆ ಎರಡು ಸಾವಿರ ರೂಪಾಯಿ ನೋಟು ವೆಸ್ಟ್ ಪೇಪರ್'ನಂತೆ ಕಾಣತೋಡಗಿತು. ಮತ್ತೆ ಎಷ್ಟು ಜನಕ್ಕೆ ಬೇಕು ಎಂದು ಕೇಳಿದರು. ಈಗ ಕೂಡ ಎಲ್ಲರೂ ತಮ್ಮ ಕೈಗಳನ್ನು ಮೇಲೆ ಎತ್ತಿದರು.
ಆಗ ಸ್ವಾಮೀಜಿ ಹೀಗೆ ಹೇಳಿದರು...
ಈಗ ನೀವು ಒಳ್ಳೆಯ ಪಾಠವನ್ನು ಕಲಿತುಕೊಂಡಿದ್ದಿರ. ಇಲ್ಲಿಯವರೆಗೂ ಈ ಎರಡು ಸಾವಿರ ರೂಪಾಯಿ ನೋಟನ್ನು ಏನೂ ಮಾಡಿದರೂ ನೀವೆಲ್ಲ ನನಗೆ ಬೇಕು ನನಗೆ ಬೇಕು ಎಂದು ಹೇಳಿದಿರಿ. ಯಾಕೆಂದರೆ ಏನೇ ಮಾಡಿದರೂ ಈ ಎರಡು ಸಾವಿರ ರೂಪಾಯಿ ಬೆಲೆ ಕಡಿಮೆಯಾಗಲ್ಲಿಲ್ಲ. ಇದು ಯಾವಾಗಲೂ ಕೂಡ ಎರಡು ಸಾವಿರ ರೂಪಾಯಿಯೇ. ಹಾಗೆ ನಮ್ಮ ಜೀವನ ಕೂಡ ಬಹಳ ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳಿಂದ ಎಷ್ಟೋ ತೊಂದರೆಗಳನ್ನು ಅನುಭವಿಸುತ್ತೆವೆ. ಕೆಲವು ಸಲ ಕೆಳಗೆ ಬಿದ್ದುಬಿಡುತ್ತೆವೆ. ಕೆಲವು ಸಲ ನಮ್ಮಷ್ಟಕ್ಕೆ ನಾವೇ ಏನೂ ಕೆಲಸಕ್ಕೆಬಾರದವರು ಎಂದು ನಿರ್ಧಾರಿಸಿಬಿಡುತ್ತೆವೆ. ಆದರೆ ನಮ್ಮಿಂದ ಏನು ತಪ್ಪಾಗಿದೆ ಎಂದು ಯೋಚಿಸುದಿಲ್ಲ. "ನೀನು ಎಂದೂ ನಿಮ್ಮ ಬೆಲೆಯನ್ನು ಕಳೆದುಕೊಳ್ಳುವುದಿಲ್ಲ". "ನೀನು ಮಹಾನ್ ವ್ಯಕ್ತಿ".... ಈ ವಿಷಯವನ್ನು ಯಾವತ್ತು ಮರೆಯಬೇಡ.
ಕೃಪೆ: ನೆಟ್.
No comments:
Post a Comment