ಆತ್ಮೀಯ ಪೋಷಕ ಬಂಧುಗಳೇ, ನಿಮ್ಮ ಮಗು ಸರ್ಕಾರಿ ಶಾಲೆಗೆ ಸೇರುವುದರಿಂದ ಆಗುವ ಲಾಭಗಳು..........
೧. ಉಚಿತವಾದ ಶಿಕ್ಷಣ.
೨. ಪ್ರತಿಭಾವಂತ ಶಿಕ್ಷಕರಿಂದ ಬೋಧನೆ.
೩. ಪೋಷಕರಿಗೆ ಆರ್ಥಿಕ ಹೊರೆ ಇಲ್ಲ.
೪. ಉಚಿತವಾದ ಸಮವಸ್ತ್ರಗಳು.
೫. ಉಚಿತವಾದ ಪಠ್ಯಪುಸ್ತಕಗಳು.
೬. ಉಚಿತವಾದ ಸೈಕಲ್ಗಳು.
೭. ವಾರದ ೫ ದಿನ ಕ್ಷೀರಭಾಗ್ಯ.
೮. ಉತ್ತಮ ಕಂಪನಿಯ ಒಂದು ಜೊತೆ ಶೂ.
೯. ವಿದ್ಯಾರ್ಥಿ ವೇತನ.
೧೦. ವಿಕಲಚೇತನರಿಗೆ ವಿಶೇಷ ಸೌಲಭ್ಯಗಳು.
೧೧. ಗ್ರಂಥಾಲಯ ಸೌಲಭ್ಯ.
೧೨. ಪ್ರಯೋಗಾಲಯ.
೧೪. ಸುಸಜ್ಜಿತ ಕೊಠಡಿಗಳು..
೧೫. ನವೀನ ಶೌಚಾಲಯಗಳು.
೧೬. ಆಟದ ಮೈದಾನ.
೧೭. ಉಚಿತ ಕ್ರೀಡಾ ಸಾಮಗ್ರಿಗಳು.
೧೮. ನಲಿ-ಕಲಿ ಮೂಲಕ ಬೋಧನೆ.
೧೯. ೧ನೇ ತರಗತಿಯಿಂದಲೇ ಇಂಗ್ಲೀಷ್ ಬೋಧನೆ.
೨೦. ಹೊಸದಾಗಿ LKG/UKG ಆರಂಭ.
೨೧. ಪ್ರತಿಭಾಕಾರಂಜಿ ಕ್ರೀಡಾಕೂಟ ಆಯೋಜನೆ.
೨೨. CCE ಮೂಲಕ ಬೋಧನೆ.
೨೩. TLM ಮೂಲಕ ಬೋಧನೆ.
೩೪. ಇನ್ಸಪೈರ್ ಅವಾರ್ಡ್ ಮೂಲಕ ಭಾವಿ ವಿಜ್ಞಾನಿಗಳಿಗೆ ಪ್ರೋತ್ಸಾಹ..
೨೫. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ.
೨೬. ವಿದ್ಯಾರ್ಥಿನಿಯರಿಗೆ ಉಚಿತ ಶುಚಿ ಪ್ಯಾಡ್.
೨೭. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.
೨೮. ರೇಡಿಯೋ ಮೂಲಕ ಚುಕ್ಕಿ ಚಿನ್ನ, ಕೇಳಿ ಕಲಿ ಕಾರ್ಯಕ್ರಮ
೨೯. ಉಚಿತವಾದ ಕಂಪ್ಯೂಟರ್ ಶಿಕ್ಷಣ.
೩೦. ಮೌಲ್ಯಶಿಕ್ಷಣ..
೩೧. ಮಕ್ಕಳಿಂದಲೇ ನಿರ್ಮಿತವಾದ ಸುಂದರ ಕೈ ತೋಟ.
೩೨. ಅಕ್ಷರ ಪೌಂಡೇಷನ್ ಸಹಯೋಗದಲ್ಲಿ ಗಣಿತ ಕಲಿಕೆಗೆ ಉಚಿತ ಸಾಮಗ್ರಿಗಳು.
೩೪. ಶಿಕ್ಷಣ ಕಲಿಕೆಯ ತಪಾಸಣೆಗಾಗಿ ದಕ್ಷ ಅಧಿಕಾರಿ/ ಮಾರ್ಗದರ್ಶಕರು.
೩೫. ಕಾಲ ಕಾಲಕ್ಕೆ ಶಿಕ್ಷಕರಿಗೆ ತರಬೇತಿ.
೩೬. ಮಕ್ಕಳ ಕಲಿಕೆ ಹಾಜರಾತಿ ದಾಖಲಿಸಲು SATS
೩೭. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ.
೭೮. ಉಚಿತ ಮಧ್ಯಾಹ್ನದ ಬಿಸಿಯೂಟ ಯೋಜನೆ.
೩೯. ಸಂಸತ್ ರಚನೆಯ ಮೂಲಕ ಪ್ರಜಾಪ್ರಭುತ್ವ ಪರಿಚಯ
೪೦. ಶಾಲೆ ಉಸ್ತುವಾರಿಗಾಗಿ sdmc ರಚನೆ.
೪೧. ವಿವಿಧ ಸಂಘಗಳ ರಚನೆಯ ಮೂಲಕ ಮಕ್ಕಳಲ್ಲಿ ಜಾಗೃತಿ.
೪೨. ಶಾಲಾ ವಾರ್ಷಿಕೋತ್ಸವ
೪೩. ನವೋದಯ ಆದರ್ಶ, ಮೊರಾರ್ಜಿ, ಕಸ್ತೂರಿಬಾ, ಕಿತ್ತೂರು ರಾಣಿ ಚೆನ್ನಮ್ಮ , ಇಂದಿರಾ, ಏಕಲವ್ಯ, ವಾಜಪೇಯಿ kps ವಸತಿ ಶಾಲೆಗಳು.
೪೪. ಮಕ್ಕಳಿಗೆ ಎಲ್ಲ ರೀತಿಯ ಮೌಲ್ಯಗಳ ಬೆಳವಣಿಗೆಗೆ ಮುಕ್ತ ಅವಕಾಶ.
೪೫. ದೈರ್ಯ, ಆತ್ಮವಿಶ್ವಾಸ, ನಾಯಕತ್ವ, ಕಷ್ಟ ಸಹಿಷ್ಣುತೆ, ಬಡತನ ಸಿರಿತನ ಇತ್ಯಾದಿಗಳ ನೈಜ ಅನುಭವ.
೪೬. ಸರ್ಕಾರಿ ವೃತ್ತಿಯಲ್ಲಿ ಕನ್ನಡ ಮಾಧ್ಯಮ, ಗ್ರಾಮಾಂತರ ಕೋಟಾ
ಇಷ್ಟೊಂದು ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿ.
ನಿಮಗೆ ನೆರವಾಗಬಹುದಾದ ಕೆಲವು ಸಾಮಾಜಿಕ ನಿಯಮಗಳು
1. ಯಾರಿಗಾದರೂ ೨ಕ್ಕಿಂತಾ ಹೆಚ್ಚುಬಾರಿ ಫೋನ್ ಕರೆ ಮಾಡಬೇಡಿ. ನಿಮ್ಮ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲವೆಂದರೆ, ಅವರಿಗೆ ಯಾವುದೋ ಅಗತ್ಯ ಕೆಲಸವಿದೆ ಎಂದು ತಿಳಿಯಿರಿ.
2. ಯಾರಿಂದಲಾದರೂ ಹಣ ಪಡೆದಿದ್ದರೆ ಅವರು ನೆನಪಿಸುವ ಅಥವಾ ಕೇಳುವ ಮುನ್ನ ಅವರಿಗೆ ಹಿಂತಿರುಗಿಸಿ. ಇದು ನಿಮ್ಮ ನಡೆತೆಯ ಸಮಗ್ರತೆಯನ್ನು ತೋರಿಸುತ್ತದೆ. ಕೆಲವರು ಹೀಗೆ ಕೊಡೆ, ಪೆನ್ ಮತ್ತು ಊಟದ ಡಬ್ಬಿಗಳನ್ನೂ ಹಿಂತಿರುಗಿಸದೇ ಒಯ್ಯುತ್ತಾರೆ!
3. ಯಾರಾದರೂ ನಿಮಗೆ ಹೋಟೆಲಿನಲ್ಲಿ ಮಧ್ಯಾಹ್ನ/ರಾತ್ರಿ ಊಟಕ್ಕೆ ಆಹ್ವಾನಿಸಿದ್ದರೆ ಹೋಟೆಲಿನಲ್ಲಿನ ದುಬಾರಿ ಆಹಾರಕ್ಕೆ ಆರ್ಡರ್ ಕೊಡಬೇಡಿ.
4. ಓಹ್, ಸರಿ ನಿಮಗಿನ್ನು ಮದುವೆಯಾಗಿಲ್ಲವೆ ?” ಅಥವಾ “ನಿಮಗಿನ್ನೂ ಮಕ್ಕಳಾಗಿಲ್ಲವೆ ?” ಅಥವಾ “ನೀವೇಕೆ ಒಂದು ಮನೆ ಖರೀದಿಸಬಾರದು ?“ ಅಥವಾ “ನೀವೇಕೆ ಒಂದು ಕಾರ್ ಖರೀದಿಸಬಾರದು ?” ಎಂಬಂತಹ ಪೇಚಿನ ಪ್ರ ಶ್ನೆಗಳನ್ನು ಕೇಳಬೇಡಿ. ದೇವರ ದಯೆ.., ಇದು ನಿಮ್ಮ ಸಮಸ್ಯೆ ಅಲ್ಲ.
5. ಯಾವಾಗಲೂ ನಿಮ್ಮ ಹಿಂದೆ ಬರುತ್ತಿರುವ ವ್ಯಕ್ತಿಗಾಗಿ ಬಾಗಿಲು ತೆರೆಯಿರಿ. ಅದು ಹುಡುಗ/ಹುಡುಗಿ, ಹಿರಿಯರು/ಕಿರಿಯರು ಆಗಿದ್ದರೂ ದೊಡ್ಡ ವಿಷಯವೇನಲ್ಲ. ಸಾರ್ವಜನಿಕವಾಗಿ ಯಾರನ್ನಾದರೂ ಚೆನ್ನಾಗಿ ನಡೆಸಿಕೊಂಡರೆ ನೀವೇನೂ ಸಣ್ಣವರಾಗುವುದಿಲ್ಲ.
6. ನಿಮ್ಮ ಸ್ನೇಹಿತರೊಂದಿಗೆ ಆಟೋ/ಟ್ಯಾಕ್ಸಿಯಲ್ಲಿ ಹೋದಾಗ ಈ ಬಾರಿ ಅವರು ಪ್ರಯಾಣದರ ನೀಡಿದರೆ, ಮುಂದಿನ ಬಾರಿ ಮರೆಯದೇ ನೀವು ನೀಡಿ.
7. ಅಭಿಪ್ರಾಯ ಭೇದಗಳನ್ನು ಗೌರವಿಸಿ. ಯಾವುದು ನಿಮಗೆ 6 ಆಗಿ ಕಾಣುವುದೋ ಅದು ನಿಮ್ಮೆದುರಿನವರಿಗೆ 9 ಆಗಿ ಕಾಣುವುದು. ಅದಲ್ಲದೆ, ಎರಡನೇ ಅಭಿಪ್ರಾಯವು ಪರ್ಯಾಯವಾಗಿ ಒಳ್ಳೆಯದು.
8. ಯಾರಾದರೂ ಮಾತನಾಡುವಾಗ ಅಡ್ಡಿ ಪಡಿಸದಿರಿ. ಅವರಿಗೆ ಪೂರ್ತಿ ಮಾತನಾಡಲು ಅವಕಾಶ ಕೊಡಿ. ಎಲ್ಲವನ್ನೂ ಕೇಳಿಸಿ ಕೊಳ್ಳಿ-ಎಲ್ಲವನ್ನೂ ಪರಿಶೋಧಿಸಿ!
9. ನೀವು ಯಾರನ್ನಾದರೂ ಕೀಟಲೆ ಮಾಡಿದಾಗ ಮತ್ತು ಅವರು ಅದನ್ನು ಆನಂದಿಸುವಂತೆ ತೋರುತ್ತಿಲ್ಲವಾದರೆ, ಅದನ್ನು ನಿಲ್ಲಿಸಿ ಮತ್ತು ಅದನ್ನು ಎಂದಿಗೂ ಮಾಡಬೇಡಿ. ಇದರಿಂದ ನಿಮ್ಮ ನಡೆಗೆ ಮೆಚ್ಚುಗೆಗೆ ಒಳಗಾಗುತ್ತದೆ.
10. ಯಾರಾದರೂ ನಿಮಗೆ ನೆರವು ನೀಡಿದರೆ, ಧನ್ಯವಾದಗಳನ್ನು ಅರ್ಪಿಸಿ.
11. ಹೊಗಳಿಗೆ ಸಾರ್ವಜನಿಕವಾಗಿರಲಿ, ವಿಮರ್ಶೆ ಖಾಸಗಿಯಾಗಿರಲಿ.
12. ಮತ್ತೊಬ್ಬರ ಶರೀರದ ತೂಕದ ಬಗ್ಗೆ ಯಾವ ಕಾರಣಕ್ಕೂ ಟೀಕಿಸಬೇಡಿ. ಸುಮ್ಮನೆ “ನೀವು ಸುಂದರವಾಗಿದ್ದೀರ” ಎಂದು ಹೇಳಿ. ತೂಕ ಕಡಿಮೆ ಮಾಡಿಕೊಳ್ಳಬೇಕೆಂದಿದ್ದರೆ ಅವರೆ ಕೇಳುತ್ತಾರೆ.
13. ಮೊಬೈಲ್ ಫೋನಿನಲ್ಲಿ ಯಾರಾದರೂ ಫೋಟೋ ತೋರಿಸಿದರೆ, ಎಡಕ್ಕೆ ಬಲಕ್ಕೆ ಸ್ವೈಪ್ ಮಾಡಬೇಡಿ. ಮುಂದಿನದು ಏನಿದೆ ನಿಮಗೆ ಗೊತ್ತಿಲ್ಲ.
14. ನಿಮ್ಮ ಸಹೋದ್ಯೋಗಿಗಳು ಡಾಕ್ಟರರ ಬಳಿ ಹೋಗಬೇಕಾಗಿದೆ ಎಂದರೆ, ಏಕೆ ಎಂದು ಪ್ರಶ್ನಿಸಬೇಡಿ, ಸುಮ್ಮನೆ “ಆರೋಗ್ಯವಾಗಿದ್ದೀರಷ್ಟೆ” ಎಂದು ಕೇಳಿ. ಅವರ ವೈಯಕ್ತಿಕ ಅನಾರೋಗ್ಯವನ್ನು ತಿಳಿಸುವಂತಹ ಇರುಸುಮುರುಸಿನ ಪರಿಸ್ಥಿತಿಗೆ ಅವರನ್ನು ತರಬೇಡಿ. ಅದು ನಿಮಗೆ ಹೇಳುವಂತದ್ದಿದರೆ, ನಿಮ್ಮ ಕುತೂಹಲದ ಹೊರತಾಗಿಯೂ ನಿಮಗೆ ಹೇಳುತ್ತಾರೆ.
15. ಅತ್ಯುನ್ನತ ಅಧಿಕಾರಿಗೆ ಕೊಡುವಷ್ಟೇ ಗೌರವವನ್ನು ಕಡಿಮೆ ದರ್ಜೆಯ ಸಿಬ್ಬಂದಿಗೂ ನೀಡಿ. ನಿಮ್ಮ ಸಿಬ್ಬಂದಿಗಳೊಂದಿಗೆ ನೀವೆಷ್ಠು ಕಠೋರವಾಗಿದ್ದೀರಿ ಎಂಬುದನ್ನು ಯಾರೂ ಗಮನಿಸುವುದಿಲ್ಲ ಆದರೆ ಅವರನ್ನು ಗೌರವದಿಂದ ನಡೆಸಿ ಕೊಳ್ಳುವುದನ್ನು ಗಮನಿಸುತ್ತಾರೆ.
16. ಯಾರಾದರೂ ನಿಮ್ಮೊಂದಿಗೆ ನೇರವಾಗಿ ಮಾತನಾಡುತ್ತಿದ್ದರೆ, ಫೋನ್ ನೋಡುತ್ತಿರುವುದು ಅಸಭ್ಯತೆ.
17. ಯಾರಾದರೂ ನಿಮ್ಮನ್ನು ಕೇಳುವವರೆಗೆ ಸಲಹೆ ನೀಡಬೇಡಿ.
18. ಯಾರನ್ನಾದರೂ ತುಂಬಾ ದಿನಗಳ ನಂತರ ಭೇಟಿಯಾಗುತ್ತಿದ್ದರೆ, ಅವರಾಗೇ ಹೇಳುವವರೆಗೂ, ಅವರ ವಯಸ್ಸು ಮತ್ತು ಸಂಬಳದ ಬಗ್ಗೆ ಮಾತನಾಡಬೇಡಿ.
19. ನೇರವಾಗಿ ನಿಮ್ಮ ಪಾತ್ರವಿಲ್ಲದ ಹೊರತು ಯಾವುದರಲ್ಲೂ ತಲೆತೂರಿಸಬೇಡಿ. ಅಂತಹವುಗಳಿಂದ ದೂರವಿರಿ; ನಿಮ್ಮ ಕೆಲಸ ನೀವು ನೋಡಿಕೊಳ್ಳಿ.
20. ರಸ್ತೆಯಲ್ಲಿ ಯಾರೊಂದಿಗಾದರೂ ಮಾತನಾಡುವಾಗ ಸನ್ ಗ್ಲಾಸ್ ಗಳನ್ನು ತೆಗೆಯಿರಿ. ಅದು ಗೌರವ ಸೂಚಕ. ಅದಕ್ಕಿಂತಾ ಹೆಚ್ಚಾಗಿ, ನಿಮ್ಮ ಮಾತಿನಂತೆ ಕಣ್ಣುಗಳ ಸಂಪರ್ಕವೂ ಮುಖ್ಯವಾದುದಾಗಿದೆ.
21. ಬಡವರ ನಡುವೆ ನಿಮ್ಮ ಸಿರಿವಂತಿಕೆ ಬಗ್ಗೆ ಮಾತನಾಡಬೇಡಿ. ಅದರಂತೆ, ಮಕ್ಕಳಿಲ್ಲದವರ ಮಧ್ಯೆ ನಿಮ್ಮ ಮಕ್ಕಳ ಬಗ್ಗೆ ಮಾತನಾಡಬೇಡಿ.
No comments:
Post a Comment